ಕವಿ ಲಕ್ಷ್ಮಣ್ ಗೊತ್ತಲ್ಲ? ಜನಪರ ಕವಿ ಲಕ್ಷ್ಮಣ್ ಎಲ್ಲ ಪ್ರಗತಿಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಾರೆ. ಮನುಷ್ಯಪರವಾಗಿ ಧ್ವನಿಯೆತ್ತುವ ಎಲ್ಲರ ಒಡನಾಡಿ ಅವರು. ಹಾಗಾಗಿ ಅವರನ್ನು ಎಲ್ಲರೂ ಲಕ್ಷ್ಮಣ್ ಜಿ ಎಂದೇ ಕರೆಯುತ್ತಾರೆ. ಲಕ್ಷ್ಮಣ್ ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷರೂ ಹೌದು. ಅವರ ಸಂಭೋಳಿ ಕೃತಿ ಕನ್ನಡದ ಮಹತ್ವದ ಆತ್ಮಕಥನಗಳಲ್ಲಿ ಒಂದು. ಈಗಾಗಲೇ ಅದು ಹಲವು ಭಾಷೆಗಳಿಗೆ ಅನುವಾದವಾಗಿದೆ. ತಲ್ಲಣ ಹುಟ್ಟಿಸುವಂತೆ ಕವಿತೆ ಬರೆಯುವ ಲಕ್ಷ್ಮಣ್ ಅವರ ಆಸೆ ಎಂಬ ಕವಿತೆ ಇಲ್ಲಿದೆ. ಇದು ಸೆ.೧೫ರ ಅಭಿಮನ್ಯು ಸಂಚಿಕೆಯಲ್ಲಿ ಪ್ರಕಟವಾಗಿದೆ.
ಆಸೆ
ಹಾಲಿಲ್ಲದೆ
ಹಸುಳೆಗಳು
ಉಸಿರು ಕಳೆದುಕೊಳ್ಳುತ್ತಿರುವಾಗ
ಕಲ್ಲು
ಖನಿಜ
ಮೂರ್ತಿಗಳಿಗೆ
ಹಾಲಿಂದ
ಅಭಿಷೇಕ ಮಾಡುವವರ
ಕೊರಳು ಕೊಯ್ಯುವಾಸೆ
ಹಸುಳೆಗಳ
ಗೋರಿಗಳಿಗೆ
ರಕ್ತದ ಅಭಿಷೇಕ
ಮಾಡುವಾಸೆ
-ಲಕ್ಷ್ಮಣ್
Sir, Its realy good. And teach something to readers. including me…